ಮೈಲಾನ್‍ನಲ್ಲಿ ನಾವು “ನಿಯಮಕ್ಕೆ ತಕ್ಕಂತೆ” ಮಾತ್ರ ವ್ಯವಹಾರ ಮಾಡುವುದಿಲ್ಲ. ನಮ್ಮ ಸಂಸ್ಥೆಯ ಉದ್ಯೋಗಿಗಳು ಅತ್ಯಂತ ಉನ್ನತ ನೈತಿಕ ಮಟ್ಟವನ್ನು ಅನುಸರಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ. ಇದರ ಅರ್ಥ ಯಾವುದು ಸರಿಯೋ ಅದನ್ನು ಮಾಡುವುದು, ಯಾವುದು ಸುಲಭವೋ ಅದನ್ನಲ್ಲ. ಯಾವಾಗಲೂ ಪ್ರಾಮಾಣಿಕವಾಗಿ ವರ್ತಿಸಬೇಕು ಮತ್ತು ನಮ್ಮ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂಬುದೇ ಇದರರ್ಥ. ಈ ಪ್ರಯತ್ನದ ಅತ್ಯಂತ ಮುಖ್ಯವಾದ ಭಾಗವೆಂದರೆ ಎಲ್ಲ ಉದ್ಯೋಗಿಗಳೂ ಅಸಮಂಜಸ ಚಟುವಟಿಕೆಯನ್ನು ಗಮನಿಸುವುದು ಮತ್ತು ವರದಿ ಮಾಡುವುದನ್ನು ಉತ್ತೇಜಿಸುವುದು.

ನಿಮ್ಮ ಕಾಳಜಿಗಳನ್ನು ಸಲ್ಲಿಸಲು ಮೈಲಾನ್ ಹಲವು ಆಯ್ಕೆಗಳನ್ನು ನೀಡುತ್ತದೆ: ಆನ್‌ಲೈನ್ ಅಥವಾ ದೂರವಾಣಿ ಮೂಲಕ, ಮೇಲ್ ಅಥವಾ ಇಮೇಲ್ ಮೂಲಕ. ಕಂಪ್ಲಯೆನ್ಸ್ ಲೈನ್ ವಾರದಲ್ಲಿ 7 ದಿನಗಳು ಮತ್ತು ದಿನದಲ್ಲಿ 24 ಗಂಟೆಗಳು ಲಭ್ಯವಿರುತ್ತದೆ. ನೀವು ನೀಡುವ ಯಾವುದೇ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ. ಕಾನೂನು ನಿರ್ಬಂಧಗಳ ಕಾರಣ ಯೂರೋಪ್ ಪ್ರಾಂತದಲ್ಲಿರುವ ಉದ್ಯೋಗಿಗಳು ಅನುಸರಣೆ ಕಾಳಜಿಗಳನ್ನು ವರದಿ ಮಾಡಲು ಆನ್‌ಲೈನ್ ಆಯ್ಕೆ ಲಭ್ಯವಿಲ್ಲ.

ಕಂಪ್ಲಯೆನ್ಸ್ ಲೈನ್

ವಾರದಲ್ಲಿ 7 ದಿನಗಳು ಮತ್ತು ದಿನದಲ್ಲಿ 24 ಗಂಟೆಗಳು
ಆನ್‌ಲೈನ್
ಇಲ್ಲಿ ಕ್ಲಿಕ್ ಮಾಡಿ (click here)

ಯೂರೋಪ್ ಪ್ರಾಂತದಲ್ಲಿರುವ ಉದ್ಯೋಗಿಗಳು ಈ ವರದಿ ವಿಧಾನವನ್ನು ಬಳಸಲಾಗುವುದಿಲ್ಲ.

ದೂರವಾಣಿ ಮೂಲಕ
ಇಲ್ಲಿ ಕ್ಲಿಕ್ ಮಾಡಿ (click here)
ಇಮೇಲ್ ಮೂಲಕ
EU ಪ್ರಾಂತ
europe.compliance@mylan.com

ಇತರ ಎಲ್ಲ ಪ್ರಾಂತಗಳು
compliance@mylan.com

ಮೇಲ್ ಮೂಲಕ

ದಿ ನೆಟ್‌ವರ್ಕ್
(ಮೈಲಾನ್ ಇಂಕ್: ಇವರ ಗಮನಕ್ಕೆ)
333 ರಿಸರ್ಚ್ ಕೋರ್ಟ್
ನಾರ್‌ಕ್ರಾಸ್, ಜಿಎ 30092 ಯು.ಎಸ್.ಎ

ಕಂಪ್ಲಯೆನ್ಸ್ ಲೈನ್‌ನ್ನು ಗ್ಲೋಬಲ್ ಕಂಪ್ಲಯೆನ್ಸ್ ಕಚೇರಿಯ ಮೇಲ್ವಿಚಾರಣೆಯಲ್ಲಿ ಮೂರನೇ ಪಕ್ಷದ ಪೂರೈಕೆದಾರ ನಿರ್ವಹಿಸುತ್ತಿದ್ದಾರೆ.

ನೀವು ಕಂಪ್ಲಯೆನ್ಸ್ ಲೈನ್‌ಗೆ ಕರೆ ಮಾಡಲು ಅಥವಾ ಆನ್‌ಲೈನ್ ಮೂಲಕ ವರದಿ ಮಾಡಲು ಆಯ್ಕೆ ಮಾಡಿದರೆ:

  • ನಿಮ್ಮನ್ನು ನಿಮ್ಮ ಹೆಸರು ತಿಳಿಸಬೇಕೆಂದು ಕೇಳಲಾಗುತ್ತದೆ ಹಾಗೂ ಅದನ್ನು ಗೌಪ್ಯವಾಗಿಡಲಾಗುತ್ತದೆ. ನಿಮ್ಮ ಹೆಸರನ್ನು ತಿಳಿಸಲು ಇಚ್ಛಿಸದಿದ್ದರೆ ನೀವು ಅನಾಮಧೇಯರಾಗಿ ವರದಿ ಮಾಡಬಹುದು. ನಿಮ್ಮ ಕರೆಯನ್ನು ದಾಖಲಿಸಲಾಗುವುದಿಲ್ಲ ಮತ್ತು ನಿಮ್ಮ IP ಅಡ್ರೆಸ್ ಟ್ರ್ಯಾಕ್ ಮಾಡಲಾಗುವುದಿಲ್ಲ.
  • • ಇಂಟರ್ವ್ಯೂ ಸ್ಪೆಶಲಿಸ್ಟ್ ನೀವು ತಿಳಿಸುವ ವಿಚಾರಕ್ಕೆ ಒಂದು ರಿಪೋರ್ಟ್ ನಂಬರ್ ನಿಗದಿ ಮಾಡುತ್ತಾರೆ ಹಾಗೂ ವಿಚಾರವನ್ನು ದಾಖಲಿಸುತ್ತಾರೆ ಅಥವಾ ನೀವು ಆನ್‌ಲೈನ್ ಮೂಲಕ ವರದಿ ಮಾಡಲು ಆಯ್ಕೆ ಮಾಡಿದರೆ ಸಾಧ್ಯವಾದಷ್ಟು ವಿವರಗಳನ್ನು ನೀಡಿ.
  • ನಿಮ್ಮ ವಿಚಾರವನ್ನು ಪರಿಶೀಲಿಸಲು ಕಂಪನಿಯ ಒಬ್ಬ ಅತ್ಯಂತ ಸೂಕ್ತ ವ್ಯಕ್ತಿಗೆ ಒಪ್ಪಿಸಲಾಗುತ್ತದೆ.
  • ಉತ್ತರವನ್ನು ಪಡೆಯಲು, ಹೆಚ್ಚುವರಿ ವಿವರಗಳನ್ನು ನೀಡಲು ಅಥವಾ ಕಂಪನಿಯು ಹೊಂದಿರುವ ಪ್ರಶ್ನೆಗಳಿಗೆ ಉತ್ತರ ನೀಡಲು ಕೆಲವು ದಿನಗಳ ನಂತರ ನೀವು ಮತ್ತೊಮ್ಮೆ ಕರೆ ಮಾಡಬಹುದು ಅಥವಾ ಆನ್‌ಲೈನ್‌ನಲ್ಲಿ ಚೆಕ್ ಮಾಡಬಹುದು.
  • ಕಂಪ್ಲಯೆನ್ಸ್ ಲೈನ್‌ಗೆ ಸದುದ್ದೇಶದಿಂದ ಮಾಡಿದ ಯಾವುದೇ ಕರೆಗಳ ಬಗ್ಗೆ, ಮುಂದೆ ವರದಿಯಲ್ಲಿನ ವಿಚಾರಗಳು ಕರಾರುವಕ್ಕಾಗಿಲ್ಲ ಅಥವಾ ಅಸಂಪೂರ್ಣ ಎಂದು ತಿಳಿದುಬಂದರೂ ಕೂಡ ಕರೆಮಾಡಿದವರ ವಿರುದ್ಧ ಪ್ರತೀಕಾರ ತಿರಿಸಿಕೊಳ್ಳಕೂಡದೆಂಬ ಕಟ್ಟುನಿಟ್ಟಾದ ನೀತಿಯನ್ನು ಕಂಪನಿಯು ಹೊಂದಿದೆ.
  • ಕಂಪ್ಲಯೆನ್ಸ್ ಲೈನ್‌ನ್ನು ದುರುಪಯೋಗಪಡಿಸಿಕೊಳ್ಳುವಂತಹ ಉದ್ಯೋಗಿಯು ಶಿಸ್ತಿನ ಕ್ರಮಕ್ಕೆ ಗುರಿಯಾಗುವ ಸಂಭವವಿರುತ್ತದೆ.

ಕಂಪ್ಲಯೆನ್ಸ್ ಲೈನ್‌ನ್ನು ಒಂದು ಮೂರನೇ ಪಕ್ಷ, ದಿ ನೆಟ್‌ವರ್ಕ್, ನಿರ್ವಹಿಸುತ್ತಿದೆ ಹಾಗೂ ವಾರದಲ್ಲಿ 7 ದಿನಗಳು ಮತ್ತು ದಿನದಲ್ಲಿ 24 ಗಂಟೆಗಳು ಲಭ್ಯವಿದೆ. ನಿಮ್ಮ ಕಾಳಜಿಯನ್ನು ದಿ ನೆಟ್‌ವರ್ಕ್ ದಾಖಲಿಸುತ್ತದೆ ಮತ್ತು ಮೈಲಾನ್‌ಗೆ ಪ್ರಸಾರ (relay) ಮಾಡುತ್ತದೆ.


ಪದೇ ಪದೇ
ಕೇಳಲಾಗುವ ಪ್ರಶ್ನೆಗಳು
ಇಲ್ಲಿ ಕ್ಲಿಕ್ ಮಾಡಿ (click here)
ಕಂಪ್ಲಯೆನ್ಸ್ ಆಫೀಸರ್‌ಗಳು
ಇಲ್ಲಿ ಕ್ಲಿಕ್ ಮಾಡಿ (click here)